Sunday, 12 February 2012

ಎಲ್ಲಿ ಹೋಯಿತು ಆ ಬಾಲ್ಯ...?


ಭಾನುವಾರ ಬರುವುದನ್ನೇ ಕಾಯುವ ,ಕನವರಿಸುವ ತವಕ ...
ಗುಡ್ಡೆ ಬೆಟ್ಟು ಕಾನಿಗೆ ನಮ್ಮ ಪಯಣ .....ಕಾಡಹಣ್ಣು ಗಳನ್ನು ತಿನ್ನೋಕೆ ....!
ಹಣ್ಣುಗಳ ಸವಿಯ ಮುಂದೆ ಸೇಬು ,ಕಿತ್ತಳೆ ಗಳನ್ನು ನಿವಾಳಿಸಬೇಕು...ಅಷ್ಟು ಮಜಾ!!
ಸಂಪಿಗೆ ಹಣ್ಣು ,ಗುಡ್ಡೆ ಗೇರಣ್ಣು ,ಬುಕ್ಕಿ ಹಣ್ಣು ,ಈಚಲ ಹಣ್ಣು ,ತುಮರಿ ಹಣ್ಣು ,
ಹಲಗೆ ಹಣ್ಣು ,ಮುಳ್ಳಣ್ಣು,ಪರಿಗೆ ಹಣ್ಣು ,ನೇರಳೆ ಹಣ್ಣು  ....ಒಂದೇ ಎರಡೇ ...
ಒಂದಕ್ಕಿಂತ ಒಂದು ರುಚಿ ....
ಅಷ್ಟೇ ಅಲ್ಲ ....ಬೆಳಗ್ಗೆ ಎದ್ದ ತಕ್ಷಣ ಕೊಟ್ಟಿಗೆಗೆ ಹೋದರೆ ....ಹಿಂದಿನ ದಿನ ಮೇಯಲು ಕಾಡಿಗೆ ಹೋದ
ಜಾನುವಾರುಗಳು ತಾರಿಕಾಯಿಗಳನ್ನು  ತಿಂದು ರಾತ್ರಿ ಮೆಲುಕು ಹಾಕುವಾಗ ಕೊಟ್ಟಿಗೆಯಲ್ಲಿ 
ಉಗುಳುವ ತಾರಿ ಬೀಜಗಳನ್ನು ಕುಟ್ಟಿ ಅದರೊಳಗೆ ಇರುವ ತೊಳೆಯನ್ನ ತಿನ್ನಬೇಕು ...
ಬಾದಾಮಿ ತಿಂದ ಸಂಭ್ರಮ .....!(ಜಾಸ್ತಿ ತಿಂದರೆ ವಾಂತಿ ,ತಲೆ ಸುತ್ತುತ್ತದೆ ...!)
ಈಗಿನ ಮಕ್ಕಳಿಗೆ....
ಅದಾವುದರ ಪರಿಚಯವೇ ಇಲ್ಲ ....ತೋರಿಸುವುದಕ್ಕೆ ನಾವದನ್ನು ಉಳಿಸಿಯೇ ಇಲ್ಲ ...
ನಮಗೀಗ ಯ್ಯಪಲ್,ಗ್ರೇಪ್ .ವಾಟರ್ ಮೆಲಾನ್ ಗಳೇ ಆಗಬೇಕು ...
ಅದೂ ದೂರದ ಚೀನಾದಿಂದ ಬರಬೇಕು ....ಮೇಲೆ ವ್ಯಾಕ್ಸಿನ್ ಸವರಿ ಪಳ ಪಳ ಅಂತ ಹೊಳೀತಿರಬೇಕು...!
ಯಾಕೆ ಹೀಗೆ...?

--ವಿಶ್ವೇಶ್ವರ .ಎಂ.ಎಸ್

ಸನ್ ಟೈಮ್ ಎಲೆಕ್ಟ್ರಾನಿಕ್ಸ್