ಯಶಸ್ಸೆಂಬ ಮಾಯೇಯೋಳು...
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ವಿಧಿಯ ಮಳೆ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ..
ಹೇಗಿರಬೇಕು ನಮ್ಮ ಬದುಕು.. ಎಂಬುದನ್ನ ಡಿ ವಿ ಜಿ ಎಂತಹಾ ಸೊಗಸಾಗಿ ಹೇಳಿದ್ದಾರೆ ನೋಡಿ ?
ಕೇವಲ ನಮಗಾಗಿ ಬದುಕುವುದಲ್ಲ ....ನಮ್ಮಿಂದ ಈ ಸಮಾಜ ಒಂದಸ್ಟನ್ನು ನಿರೀಕ್ಷೆ ಮಾಡುತ್ತಿದೆ ...
ಅದರ ಪ್ರತೀಕ್ಷೆಯನ್ನ ಹುಸಿಗೊಳಿಸಬಾರದು... ಈ ಸಮಾಜದ ಋಣ ನಮ್ಮ ಮೇಲಿದೆ ...ಆ ಮೂಲಕ
ನಮ್ಮ ಯಶಸನ್ನು ಸಾಧಿಸಿಕೊಳ್ಳಬೇಕು ...ಪರಸ್ಪರ ಪ್ರೀತಿ,ವಿಶ್ವಾಸ ,ನಗು,ಅನೋನ್ಯತೆ,ಅನುಕಂಪ,ಕಾಳಜಿ,ಕಳಕಳಿ ಹೀಗೇ ...ಯಾವುದೇ ಪರಿಮಿತಿಯಿಲ್ಲದೆ
ವ್ಯಕ್ತಿ ವ್ಯಕ್ತಿ ಗಳೊಂದಿಗೆ ಸಂಪರ್ಕ ಸಾಧಿಸಿ.. ಆ ಮೂಲಕ ನಿಜವಾದ ಬದುಕಿನ ಯಶಸ್ಸನ್ನು ಕಂಡುಕೊಳ್ಳಬೇಕು
ಈ ಯಶಸ್ಸೆಂಬ ಮಾಯಾ ಜಿಂಕೆಯನ್ನ ವಶಪಡಿಸಿಕೊಳ್ಳುವುದು ಹೇಗೆ...?
ಸತತ ಪರಿಶ್ರಮದಿಂದ ಮಾತ್ರ ಸಾದ್ಯ ....
ಸೋಲಾಗಬಹುದೆಂದು ಪ್ರಯತ್ನವನ್ನೇ ಮಾಡದಿದ್ದರೆ ...?
ಮಾವುತನ ಕೈಯಲ್ಲಿ ಪಳಗಿದ ಆನೆ ಯಂತಾಗುವುದಿಲ್ಲವೇ... ನಮ್ಮ ಬದುಕೂ ....?!
ನಿಜವಾಗಿ ಆನೆಗೆ ತನ್ನ ಸಾಮರ್ಥ್ಯದ ಅರಿವಿದ್ದಿದ್ದರೆ .....ಆ ಮಾವುತ ಆನೆಯನ್ನ ಪಳಗಿಸಲು ಸಾಧ್ಯವಿತ್ತೆ...?
ಸಾಧಿಸಿಯೇ ಸಾಧಿಸುತ್ತೇನೆ ..ಎಂಬ ಆತ್ಮವಿಶ್ವಾಸ ಜೊತೆಗೆ ಕಠಿಣ ಪರಿಶ್ರಮದಿಂದ ಹೆಜ್ಜೆ ಇಟ್ಟರೆ
ಯಾವುದೂ ಅಸಾಧ್ಯವಲ್ಲ
...
ನೆನಪಿರಲಿ ..."ಯಶಸ್ಸು"
ಒಮ್ಮೆಗೇ ಸಿಗುವಂತಹದಲ್ಲ ...
ಸಣ್ಣ ಸಣ್ಣ ಗೆಲುವನ್ನ "ಯಶಸ್ಸಿಗೆ"ಮೆಟ್ಟಿಲಾಗಿ ಬಳಸಿಕೊಳ್ಳುತ್ತಾ ಸಾಗಬೇಕು .
ಆಕಾಶಕ್ಕೆ ಗುರಿಯನ್ನಿಟ್ಟರೆ ಮರದ ತುದಿಯನ್ನಾದರೂ ಏರಬಹುದು
ನೆಲ ಬಿಟ್ಟೇ ಕದಲದಿದ್ದರೆ ...ನೆಲ ಬಾಯ್ದೆರೆದರೆ
....ಘೋರ ಪ್ರಪಾತವೆ ಗತಿ ....!
"ಯಶಸ್ಸು" ಕಂಡ ಕಂಡಲ್ಲಿ ಬೆಳೆಯುವ ಕಣಗಲೆ ಹೂವಲ್ಲವಂತೆ ಅದು ಆತ್ಮವಿಶ್ವಾಸವಿರುವ,
ಸೃಜನಶೀಲ ಮನಸುಳ್ಳ ,ಶಿಸ್ತು ಬದ್ದತೆಯುಳ್ಳ,ಸಮಯಪ್ರಜ್ಞೆ ಯುಳ್ಳ ,ಚುರುಕಿನ ವ್ಯಕ್ತಿತ್ವ ಉಳ್ಳವರ
ಪವಿತ್ರ ಹೃದಯಗಳಲ್ಲಿ ಬೆಳೆಯುವ ಮಂದಾರಪುಷ್ಪವಂತೆ ....
-ವಿಶ್ವೇಶ್ವರ ಎಂ ಎಸ್
-ವಿಶ್ವೇಶ್ವರ ಎಂ ಎಸ್
ಸನ್ ಟೈಮ್ ಎಲೆಕ್ಟ್ರಾನಿಕ್ಸ್
No comments:
Post a Comment