ಸಾಲಾಗಿ ಸಾಗುವ ಇರುವೆಯ ಸಾಲನ್ನೊಮ್ಮೆ ಹಾಗೇ ಗಮನಿಸಿ... ಎಷ್ಟೊಂದು ಏಕಾಗ್ರತೆ
....! ಕೇವಲ ತಮ್ಮ ಗಮ್ಯದತ್ತ ಅವುಗಳ ಚಿತ್ತ
ಸಾಲಾಗಿ ಸಾಗುತ್ತಿರುವ ಇರುವೆಯನ್ನೊಮ್ಮೆ ನಿಮ್ಮ ಬೆರಳಿನಿಂದ ಸರಿಸಿ ಬಿಡಿ..
ಎಲ್ಲಾ ಚೆಲ್ಲಾಪಿಲ್ಲಿ .....ಸ್ವಲ್ಪ ಹೊತ್ತು ಹಾಗೇ ಗಮನಿಸಿ ....
ಮತ್ತದೇ ಸಾಲು
......ಮತ್ತೆ ನಿಮ್ಮ ಬೆರಳಿನಿಂದ ......ಹೀಗೇ ಎಷ್ಟೇ ಸಾರಿ ನೀವು ಆ ಇರುವೆ ಸಾಲಿಗೆ ಭಂಗ ತನ್ನಿ .....ಅವು
ತಮ್ಮ ಓಟವನ್ನ ನಿಲ್ಲಿಸಲಾರವು ...ತಾವು ಸೇರಬೇಕಾದ ಗುರಿಯನ್ನ ತಲುಪುವತ್ತ ಅವುಗಳ ಪ್ರಯತ್ನ ನಿರಂತರ
.....
ನಾವು.....?
ಕೆಲಸ ಶುರುವಿಟ್ಟುಕೊಳ್ಳುವಾಗಲೇ .....ಇದು ಸಾಧ್ಯನಾ
.....ನಂನಿಂದಾಗತ್ತಾ.....? ಸುಮ್ನೆ ಯಾಕೆ ಶ್ರಮ ....?
ಸಾಕು... ಅಪ್ಪ ಮಾಡಿಟ್ಟ ಅಡಿಕೆ ಕಾಯಿ ಹೆಕ್ಕ್ಯಂಡು ....ಹಂಗು ಹಿಂಗೂ ......ಕಾಲ ಕಳದ್ರಾತು
....!
ಆದರೆ...ಗಮನಿಸಿ....
ಒಂದು ಇರುವೆ ಕೂಡ ಮುಂದೆ ಬರಬಹುದಾದ ಮಳೆಗಾಲಕ್ಕೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳುತ್ತೆ ,ಅಹಾರವನ್ನ
ಗೂಡಿನಲ್ಲಿ ಶೇಕರಿಸಿಕೊಳ್ಳುತ್ತದೆ .
ಇರುವೆ,ಜೆನ್ನೋಣ,ಗೆದ್ದಿಲುಗೆಳೆ ನಮಗೆ ರೋಲ್ ಮಾಡೆಲ್ ಆಗಬೇಕು ಎನಿಸುತ್ತದೆ
ಬೃಹದಾಕಾರವಾಗಿ ಬೆಳೆದು ನಿಂತ ಮರವನ್ನ ಹೇಗೆ ಗೆದ್ದಿಲು ಹುಳು ಇನ್ನಿಲ್ಲವಾಗಿಸುತ್ತವೆ ನೋಡಿ ....
ಅವುಗಳಲ್ಲಿ ಇರಬಹುದಾದ ಕಾರ್ಯ ಕ್ಷಮತೆಗೆ ಇದೊಂದು ಉದಾಹರಣೆಯಷ್ಟೇ .
ಗೆದ್ದಿಲುಗಳು ಕಟ್ಟಬಹುದಾದ ಹುತ್ತವನ್ನೊಮ್ಮೆ ಗಮನಿಸಿ....ಯಾವ ಆರ್ಕಿಟೆಕ್ಕಿಗೆ ಕಡಿಮೆ ಹೇಳಿ ...
ಅಷ್ಟೇ ಅಲ್ಲ
....ಆ ಮನೆಯನ್ನ ಕೆಡವಿಹಾಕಿ... ಮಾರನೇ ದಿನ ಹೋಗಿ ನೋಡಿ...
ನೀವು ಬೆರಗಾಗಿ ಹೋಗಬೇಕು ....! ನೀವು ಕೆಡವಿದ್ದು ಎನ್ನುವ ಕುರುಹೂ ಕೂಡ ನಿಮಗೆ ಸಿಗಲಿಕ್ಕಿಲ್ಲ .....!!
ಅಷ್ಟು ಅಚ್ಚುಕಟ್ಟಾಗಿ ಮತ್ತೆ ಕಟ್ಟಿ ನಿಲ್ಲಿಸುವುದರಲ್ಲಿ ಗೆದ್ದಿಲುಗಳ ಸಾಮರ್ಥ್ಯ ಅಸಾಧಾರಣವೇ ಸರಿ.
ಇನ್ನು ಜೆನ್ನೋಣ
....ಅವು ನಿರ್ಮಿಸುವ ಮನೆ ....ಆ ಮನೆಯ ಪ್ರತಿಯೊಂದು ಕೋಣೆ,ಒಂಚೂರು ವ್ಯತ್ಯಾಸವಿಲ್ಲದ ಅದರ ಅಳತೆ
ಆ ಸ್ವಚ್ಛತೆ ಅವುಗಳ ಶಿಸ್ತುಬದ್ಧ ಬದುಕಿನ ಕ್ರಮ ....
ಈ ಎಲ್ಲಾ ಸಂಗತಿಗಳು ಅವುಗಳಲ್ಲಿ ಕರಾರುವಕ್ಕಾಗಿ ನಡೆಯುವ ಬಗೆ ಹೇಗೆ ....?
ಅದೇ ...ಅವುಗಳಲ್ಲಿನ ಶಿಸ್ತುಬದ್ಧ ಸಂಘಟನೆಯಿಂದ .....!
ಸಂಘಟನೆ ಎಂದರೆ....?
ವಿಘಟನೆಯಿಲ್ಲದ್ದು .....!!
ಇರುವೆ ಗೆದ್ದಿಲು ಹಾಗು ಜೆನ್ನೋಣ ಗಳಲ್ಲಿ ಅಂತಹ ವ್ಯವಸ್ಥಿತ ವಾದ ಸಂಘಟನೆಯನ್ನ ನಾವು ಕಾಣುತ್ತೇವೆ
ಅವುಗಳಿಗೆ ಕಟ್ಟುವುದಷ್ಟೇ ಗೊತ್ತು ....ಮುನ್ನಡೆಯುವುದರಲ್ಲಿಯೇ ಬದುಕಿನ ಸಾರ್ಥಕತೆ
....!
ಇಲ್ಲಿ ನಾಯಕತ್ವ ಪ್ರಧಾನ ಪಾತ್ರ ವಹಿಸುತ್ತದೆ ಅದರ ನಿರ್ದೇಶನದ ಮೇರೆಗೇ ಎಲ್ಲಾ ನಡೆಯುವಂತಾದ್ದು
ಹಾಗೆಯೇ ನಮ್ಮಲ್ಲೂ ಅಂತಹ ಸಮರ್ಥ ನಾಯಕತ್ವ ಗುಣವನ್ನ ಬೆಳೆಸಿಕೊಳ್ಳಬೇಕು ....
ಯಶಸ್ಸು ಸಿಗಬೇಕಾದರೆ ...ಪರಿಶ್ರಮ ಇರಬೇಕು...
ಪರಿಶ್ರಮ ಪಡಬೇಕೆಂದರೆ... ಏಕಾಗ್ರತೆ ಬೇಕು
ಎಲ್ಲವನ್ನ ನಿಭಾಯಿಸಬಲ್ಲ ಸಾಮರ್ಥ್ಯ ಬೇಕು ....
ಇದಿಷ್ಟು ಸಾದ್ಯ ಅಂತಾದರೆ ....
ನಾವಗಲೇ ನಾಯಕತ್ವ ಗುಣವನ್ನ ಹೊಂದಿದ್ದೇವೆ ಅಂತಲೇ ಅರ್ಥ ...!
ಆದರೆ....
ಆ ಸಣ್ಣ ಕೀಟಗಳಿಗೆ ಹೋಲಿಸಿದರೆ ......ನಾವು ಅವುಗಳಿಂದ
ಕಲಿಯಬೇಕಾದ್ದು ,ಮತ್ತು
ನಮ್ಮ ಬದುಕಿಗೆ ಅಳವಡಿಸಿ ಕೊಳ್ಳಬೇಕಾದ್ದು ತುಂಬಾ ಇದೆ ಅನಿಸುವುದಿಲ್ಲವೇ ....?
ಖಂಡಿತಾ
......
-ವಿಶ್ವೇಶ್ವರ ಎಂ ಎಸ್
-ವಿಶ್ವೇಶ್ವರ ಎಂ ಎಸ್
ಸನ್ ಟೈಮ್ ಎಲೆಕ್ಟ್ರಾನಿಕ್ಸ್



No comments:
Post a Comment