ಮತ್ತೆ ಶುರುವಾಗಿದೆ…..ಗುಬ್ಬಿಗಳ ಕಲರವ ....!!
ತಂದು ನಿಲ್ಸದೆ ತಡ ...ನಾವು ಗಾಡಿ ಹತ್ತಿ ಹೊರಡದೆ ...ಅಕ್ಕಿ ಮಿಲ್ಲಲ್ಲಿ ಗುಬ್ಬಚ್ಚಿ ನೋಡೋಕೆ
....!
ಏನ್ ಸಂಬ್ರಮ ಅದು ಅಂತೀರಿ ...? ಹತ್ರ ಹೋದ್ರೆ ಸಾಕು ....ಪುರ್ ಅಂತ ಗುಂಪು ಗುಂಪಾಗಿ ಹಾರೋದು .....
ಮತ್ತೆ ಗುಂಪು ಗುಂಪಾಗಿ ಬರ್ ಅಂತ ಬಂದು ಕೂರೋದು
....
ಆ ಕಲರವ
....ಅವು ಮೈ ಕೊಡವಿ ,ಮೂತಿ ನೆಲಕ್ಕೆ ತಿಕ್ಕಿ ಕಾಳು ಕಚ್ಚಿ ಹಾರೋ ರೀತಿಯೇ ...ನೋಡೋದಕ್ಕೆ ಒಂತರಾ ಖುಷಿ ...
ಹಿಂಡು ಹಿಂಡಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಅವು ಬದುಕುವ ರೀತಿಯೇ ಬಲು ಸೊಗಸಾಗಿತ್ತು
ಭಾಸ್ಕರನ ದಿನಸಿ ಅಂಗಡಿಯಿಂದ ಕಾಡಿ ಬೇಡಿ ತಂದ ಕಸ್ತೂರಿ ನೀಲಂ ಬಾರ್ ಸೋಪಿನ ಪೆಟ್ಟಿಗೆಯನ್ನ
ನೀಟಾಗಿ ಜೋಡಿಸಿ
...ಮದ್ಯೆ ಒಂದು ಕೈ ತೂರುವಷ್ಟು ರಂಧ್ರ ಕೊರೆದು
ಮನೆ ಮಾಡಿಗೊ ತೊಲೆಗೋ ಕಟ್ಟಿ ಇಟ್ರೆ ಸಾಕು ಅದೇ ಅವಕ್ಕೆ ಅರಮನೆ
...!
ಹುಲ್ಲು ಕಡ್ಡಿ ಹತ್ತಿ ಹೀಗೇ ತಮಗೆ ಬೇಕಾದನ್ನ ತಂದು ಗೂಡನ್ನ ಬೆಚ್ಚಗೆ ಇಟ್ಟುಕೊಳ್ಳುತ್ತವೆ
ಈಗೆಲ್ಲಿದೆ ...ಆ ಕಲರವ ....?
ಈಗಿನ ಅಕ್ಕಿ ಮಿಲ್ಲುಗಳು ಭಣ ಭಣ ....ಮಿಲ್ಲಿನ ಕರ್ಕಶ ಶಬ್ದ
ಬಿಟ್ರೆ ಬೇರೇನೂ ಇಲ್ಲ ....
ಆ ಬಾನಾಡಿಗಳು ಎಲ್ಲಿ ಹಾರಿ ಹೋದವು
...?
ಪಾಪ ...ಮೊಬೈಲ್ ಟವರಿನ ತರಂಗಾಂತರಗಳಿಗೆ ನಲುಗಿ ಹೋದವೇ ಅವು ...?
ಮೊಬೈಲ್ ರಿಂಗಣಗಳ ಬರಾಟೆಯಲ್ಲಿ ಪಾಪ... ಗುಬ್ಬಚ್ಚಿಯ ಚಿಂವ್ ಚಿಂವ್ ನಿನಾದ ನಮಗಾರಿಗೂ ಕೇಳಲೇ ಇಲ್ಲ ..
ಹೀಗೆ ಅಂದುಕೊಂಡು ಗುಬ್ಬಚ್ಚಿಯನ್ನ ನೆನೆಪು ಮಾಡಿ ಕೊಳ್ಳುತ್ತಲೇ
ಆಶ್ಚರ್ಯ ಕಾದಿತ್ತು ನನಗೆ ....!
ಮತ್ತೆ ಶುರುವಾಗಿದೆ ಗುಬ್ಬಿಗಳ ಕಲರವ ....!!
ಕಳೆದ ಒಂದಷ್ಟು ವರ್ಷ ಕಾಣೆಯೇ ಆಗಿಹೋಗಿದ್ದ ಗುಬ್ಬಚ್ಚಿಗಳು ಮತ್ತೆ...
ಚಿಂವ್.. ಚಿಂವ್ ನಿನಾದ ಗೈಯುತ್ತಿವೆ
ಮರಳಿ ಬದುಕಿನ ಹಕ್ಕನ್ನು ಗುಬ್ಬಿ ಮತ್ತೆ ಪಡೆದಿದೆ ....!
ಹ್ಯಾಟ್ಸಾಪ್.....ಗುಬ್ಬಿಗಳೇ
.....! ಮನುಷ್ಯನ ಆಧುನಿಕ ಮೋಹ ಪಾಶಕ್ಕೆ ಸಿಲುಕಿಯೂ
... ಜಯಿಸಿ ಬಂದದಕ್ಕೆ
...!
-ವಿಶ್ವೇಶ್ವರ ಎಂ ಎಸ್
-ವಿಶ್ವೇಶ್ವರ ಎಂ ಎಸ್
ಸನ್ ಟೈಮ್ ಎಲೆಕ್ಟ್ರಾನಿಕ್ಸ್


No comments:
Post a Comment