Tuesday, 7 February 2012


ಪರಿಶ್ರಮ ,ಶ್ರದ್ಧೆ ,ಆತ್ಮವಿಶ್ವಾಸ ,ಇವು ಯಶಸ್ಸಿನ ಮೆಟ್ಟಿಲುಗಳು ....
ಇರುವೆ .ಗೆದ್ದಿಲು,ಜೆನ್ನೋಣಗಳಲ್ಲಿ ಪರಿಶ್ರಮವನ್ನು ಕಾಣುತ್ತೇವೆ ;ಗೀಜಗನಲ್ಲಿ ಶ್ರದ್ಧೆಯನ್ನ ಕಾಣ್ತೇವೆ 
ಆತ್ಮ ವಿಶ್ವಾಸವನ್ನ .....ಜೇಡಗಳಲ್ಲಿ ಕಾಣಬೇಕು ...!
ಆಹಾರವನ್ನ ಹುಡುಕಿಕೊಂಡು ಅದು ಎಲ್ಲಿಯೂ ಹೋಗುವುದಿಲ್ಲ ....!
ತನ್ನಲ್ಲಿಗೆ ಆಹಾರ ಸಿಲುಕುವಂತೆ ಮಾಡಿಕೊಳ್ಳುತ್ತದೆ ......ಜೇಡ 
ತನ್ನಲ್ಲಿಯೇ ಉತ್ಪತ್ತಿ ಯಾಗುವ ದ್ರವದಿಂದ ಬಲೆ ಹೆಣೆಯುತ್ತದೆ 
ಹೆಣೆದ ಬಲೆಗೆ ಸಿಲುಕುವ ಕೀಟಗಳೇ ಜೇಡದ ಆಹಾರ ....
ಒಮ್ಮೊಮ್ಮೆ.. ಬಲೆಗಿಂತ ಬಲಾಡ್ಯ ಸಿಲುಕಿದರೆ...ಬಲೆಗದು ನಿಲುಕದಿದ್ದರೆ...ಬಲೆ ತುಂಡಾದರೆ.....
ಜೇಡಕ್ಕೇನೂ ಬೇಸರವಿಲ್ಲ .....ಮತ್ತದು ಬಲೆ ನೇಯುವುದರಲ್ಲಿ ಮಗ್ನ....!
ಎಷ್ಟು ಸಲ ಬಲೆ ಹಾಳಾದರೂ .....ಅದರ ಪ್ರಯತ್ನ ಮಾತ್ರ  ನಿರಂತರ.....
ನಾವೂ ಅಂತಹ ಪ್ರಯತ್ನಶಾಲಿಗಳಾಗೊಣವೇ....?
--ವಿಶ್ವೇಶ್ವರ .ಎಂ.ಎಸ್
ಸನ್ ಟೈಮ್ ಎಲೆಕ್ಟ್ರಾನಿಕ್ಸ್ .



No comments:

Post a Comment