Monday, 16 January 2017

ಅದ ಹುಣ್ಣಿಗೆ ಉಪ್ಪನೆರೆದು
ಉಪ್ ಎ0ದುಸುರಿ ನೋಡ್ವ ಕಣ್ಣಿಗೆ
ಕೂದಲೊಳು ಬೆಣ್ಣೆ ತೆಗೆದ0ದದಲಿ
ತೋರ್ಪ ನಿನ್ನೆಯ ಜಾಣ್ಮೆಯನು
ಅರಗಿಸಲು ಎನ್ನ ಮನವೊಪ್ಪದೇತಕೋ....


ಒಡೆದ ಕನ್ನಡಿ ಚೂರಿನೊಳಗೆ 

ಮತ್ತೆ ನಿನ್ನದೆ ಬಿ0ಬವು
ನ0ಬಿ ಸೋತಿಹ ನೊ0ದ ಮನವಿದು
ತಲೆಯನೊತ್ತಿದ ದಿ0ಬಿನಲ್ಲೂ 

ಹನಿಯ ಕ0ಬನಿ ತೋಯ್ದಿದೆ

ಭಾರವಾಗಿದೆ ಮನವು
 ತೋರಲಾರದೆ ನೋವು
ಖಾರವಾಗಿ ಹರಿಯುತಿದೆ ಕೆಲವೊಮ್ಮೆ
ಅರಿಯಲಾರೆಯ ವೇದನೆ...?

ಕಹಿಯು ಸತ್ಯವು ಪಥ್ಯವಾಗದೆ
ಸತ್ವ ಹೀನದ ಮಾತು ಸುಮ್ಮನೆ
ಮಿಥ್ಯವಾಕ್ಯದ ಮಾತನಾಡೆನು
ಸ್ವಚ್ಚ ಹೃದಯವು ಎ0ದಿಗೂ...

ಕರೆದೆ ನಾನು ಹಗಲು ಇರುಳು
ಬರದೆ ಸುಮ್ಮನೆ ಬಿ0ಕ ಬಿಡದೆ
ವಿವೇಕವಿಲ್ಲದೆ ಸರಿದ ಸಮಯಕೆ
ವ್ಯರ್ಥದೂರುವುಚಿತವೇ...?

ಮೊಡಕೆ ಮಾಡಲು ಎಷ್ಟು ದಿವಸ
ಕುಟ್ಟಿ ಒಡೆಯಲು ಸಾಕು ನಿಮಿಷ
ಅರ್ಥವಾದರೆ ಶ್ರಮವು ಸಾರ್ಥಕ
ಅರಿಯಲಾರದ  ಜಾಣ ನೀನು..!

ಕಟ್ಟಿ ಬೆಳೆಸಿದ ಶ್ರಮವ ಬಲ್ಲೆ
ಮೆಟ್ಟಿ ನಿ0ತಿಹ ಆದಿಷೇಶ..!!
ಕುಟ್ಟಿ ಪುಡಿಗೈವ ಮ0ದಿಗೆ
ದಿಟ್ಟ ಉತ್ತರ ವೇದಿಕೆ


ದ್ವೇಷ ಮಾಡಲು ಸಮಯವೆಲ್ಲಿದೆ
ಪ್ರೀತಿ ಮಾಡಲು ಏನು ಉಳಿಸಿದೆ...?
ಯಾಕೆ ಸುಮ್ಮನೆ ದ್ವ0ದ್ವವು....
                         -ವಿಶ್ವ ಸನ್ ಟೈಮ್

No comments:

Post a Comment