ಮಾರ್ಗಮದ್ಯೆ
ನಿಂತೆಯೇಕೆ
ದಾರಿಯುಂಟು
ಮುಂದಕೆ ...
ಮನದ
ಕಿಟಕಿ ತೆರದೆಯುಂಟು
ಮುಚ್ಚಲಾರೆ
ಸುಮ್ಮನೆ ...
ಮನದ
ದುಗುಡ ನುಂಗಲೇಕೆ
ಪರದೆಯೇಕೆ
ಮನಸಿಗೆ ...
ಬಿಚ್ಚು
ನುಡಿಯು ಚುಚ್ಚ ಬಹುದು
ಕಹಿಯು
ತಾನೇ ಮಾತ್ರೆಯು...
ಹರಿದು
ಬಿಡಲಿ ಒಡಲ ಕೊರಗು
ಕೂಗಿ
ಹೇಳು ಕದನಕೆ...
ಕೂಡು
ಬಾಳು ಸಮರವಲ್ಲ
ತಾಳ
ಮೇಳ ರಂಜನೆ ...!!
-ವಿಶ್ವ ಸನ್ ಟೈಮ್
No comments:
Post a Comment